ಡಾ. ಜಾನ್‌ ಟಿರೊಲ್‌ಶ (ಜ.೧೯೫೩,ಫ್ರಾನ್ಸ್ ದೇಶದ,ಟ್ರಾಯ್ಸ್, ನಲ್ಲಿ) ರವರು ಫ್ರಾನ್ಸ್‌ ದೇಶದ ಫ್ರೆಂಚ್ ಅರ್ಥಶಾಸ್ತ್ರಜ್ಞ, ೨೦೧೪ ರ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿಗೆ ಆಯ್ಕೆಯಾದ ವ್ಯಕ್ತಿ. ಸರ್ಕಾರ, ವಾಣಿಜ್ಯ ಒಕ್ಕೂಟಗಳೊಂದಿಗೆ ಹೇಗೆ ವ್ಯವಹರಿಸಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಯಾವ ರೀತಿ ನಿಯಂತ್ರಿಸಬೇಕು ಎನ್ನುವ ವಿಷಯದ ಬಗ್ಗೆ ಅವರು ಒಂದು ಹೊಸ ನೀತಿಯನ್ನು ಪ್ರಚಾರಕ್ಕೆ ಅನುವುಮಾಡಿಕೊಟ್ಟರು. ಇದು ಅರ್ಥ ಶಾಸ್ತ್ರಕ್ಕೆ ನೀಡುವ ಪಾರಿತೋಷಕವಾದರೂ, ವಿಶೇಷವಾಗಿ, ಮಾರುಕಟ್ಟೆ ಶಕ್ತಿ- ಸಾಮರ್ಥ್ಯ ಮತ್ತು ನಿಯಂತ್ರಣ ಕುರಿತು ಕೈಗೊಂಡ ಸಂಶೋಧನೆಗಾಗಿ 'ಸ್ವೀಡಿಷ್ ರಾಯಲ್ ಅಕ್ಯಾಡೆಮಿ' ಆವರಿಗೆ 'ಆಲ್ಫ್ರೆಡ್ ನೋಬೆಲ್' ನೆನಪಿಗಾಗಿ ಈ ಪ್ರಶಸ್ತಿಯನ್ನು ಪ್ರದಾನಮಾಡುವ ನಿರ್ಣಯ ತೆಗೆದುಕೊಂಡಿದೆ. === ಜನನ,ವಿದ್ಯಾಭ್ಯಾಸ,ಹಾಗೂ ವೃತ್ತಿ === 'ಜಾನ್ ಟಿರೊಲ್' ಫ್ರಾನ್ಸ್ ದೇಶದ 'ಟ್ರಾಯ್ಸ್' ಎಂಬ ಊರಿನಲ್ಲಿ ಆಗಸ್ಟ್, ೯, ೧೯೫೩ ರಲ್ಲಿ ಜನಿಸಿದರು. ವೃತ್ತಿಪರತೆ. == ಸಂಶೋಧಕ, ಲೇಖಕ,ಉಪನ್ಯಾಸಕಾರ == ೧೯೮೦ ರ ಮಧ್ಯಭಾಗ, ಮತ್ತು ಮುಂದಿನ ದಿನಗಳಲ್ಲಿ ಮಾರುಕಟ್ಟೆ ವೈಫಲ್ಯ ಕುರಿತ ಸಂಶೋಧನೆಗೆ ಹೊಸ ತಿರುವು ನೀಡುವ ಮೂಲಕ 'ಡಾ.ಜಾನ್ ಟಿರೊಲ್', ವಿಶ್ವದ ಗಮನಸೆಳೆದರು. ಕೆಲವು ಪ್ರಭಾವಿ ಶಕ್ತಿಗಳ ಹಿಡಿತದಿಂದಮಾರುಕಟ್ಟೆಯನ್ನು ಹೇಗೆ ಮುಕ್ತಗೊಳಿಸಬೇಕು ಎಂಬ ಬಗ್ಗೆ ಅವರು ನೀಡಿದ್ದ ಸಲಹೆಗಳಿಂದ ಹೊಸ ಮಾರುಕಟ್ಟೆಯ ನೀತಿಗಳನ್ನು ರೂಪಿಸಲು ನೆರವಾಯಿತು. ಈ ಬಗ್ಗೆ ನಿಯಮಿತವಾಗಿ ಸಂಶೋಧನ ಪತ್ರಗಳು, ಲೇಖನಗಳು, ಪುಸ್ತಕಗಳನ್ನು ಅವರು ಬರೆದಿದ್ದಾರೆ. === ಡಾ.ಜಾನ್ ಟಿರೊಲ್ ಮಾರುಕಟ್ಟೆಯ ಹೊಸನೀತಿ === ಈ ಹೊಸ ಪ್ರಭಾವಿ ಸಂಶೋಧನೆಯಿಂದಾಗಿ ದೂರ ಸಂಪರ್ಕ, ಬ್ಯಾಂಕಿಂಗ್‌, ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸಲು ಸಹಕಾರಿಯಾಗಿದೆ. ಸ್ವೀಡನ್‌ನ ರಾಯಲ್‌ ಅಕಾಡೆಮಿ ರವರ ಸಂಶೋಧನೆಯನ್ನು ಪರಿಗಣಿಸಿದೆ. ೨೦೧೪ ರ, ನೋಬೆಲ್ ಪುರಸ್ಕಾರವನ್ನು ಅರ್ಥಶಾಸ್ತ್ರದ ನೋಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಈ ವಿಶಯ ಆಲ್‌ಫ್ರೆಡ್ ನೊಬೆಲ್ ರವರ ಹಿಂದಿನ ಮೂಲ ಉಯಿಲಿನಲ್ಲಿರಲಿಲ್ಲ. ಇದನ್ನು ೧೯೬೮ ರಲ್ಲಿ ಪ್ರಥಮ ಬಾರಿಗೆ ಸೇರಿಸಲಾಯಿತು. 'ಆಲ್‌ಫ್ರೆಡ್ ನೊಬೆಲ್' ಅವರ ಸ್ಮರಣೆಗಾಗಿ 'ಸ್ವೀಡನ್ ಕೇಂದ್ರೀಯ ಬ್ಯಾಂಕ್' ಇದನ್ನು ವಿತ್ತತಜ್ಞರಿಗೆ ನೀಡುತ್ತದೆ. ಪದಕಕ್ಕೆ ಅರ್ಹತೆಯನ್ನು 'ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ' ನಿರ್ಧರಿಸುತ್ತದೆ. ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಯಾವ ರೀತಿ ನಿಯಂತ್ರಿಸಬೇಕು ಎನ್ನುವ ವಿಷಯದ ಬಗ್ಗೆ ಅವರು ಒಂದು ಹೊಸ ನೀತಿಯನ್ನು ಪ್ರಚಾರಕ್ಕೆ ಅನುವುಮಾಡಿಕೊಟ್ಟಿದ್ದಲ್ಲದೆ, ಜಾನ್ ಟಿರೊಲ್ ರವರು, ನಿಯಮಿತವಾಗಿ ಲೇಖನಗಳು, ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ ಭಾಷಣಗಳಲ್ಲಿ ಈ ವಿಶಯಗಳಬಗ್ಗೆ ಬೆಳಕು ಚೆಲ್ಲಿದ್ದಾರೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಪ್ರಜಾವಾಣಿ, ೧೦-೧೪-೨೦೧೪,ಟಿರೊಲ್‌ಗೆ ಅರ್ಥಶಾಸ್ತ್ರದ ನೊಬೆಲ್‌ 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. , , , 13, 2014 ' ' , , '. 2014-10-18 ವೇಬ್ಯಾಕ್ ಮೆಷಿನ್ ನಲ್ಲಿ. , , 15 2015, ' , 'économie 2014' ?